ಅಕ್ಟೋಬರ್ 2 ರಿಂದ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಿಂದ ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರನ್ನು ಹೊರಹಾಕಲಾಗಿದೆ. ಕೆಳ ಬೆನ್ನಿನಲ್ಲಿ ಸಣ್ಣ ಒತ್ತಡ ಮುರಿತದಿಂದ ಬಳಲುತ್ತಿದ್ದಾರೆ ಎಂಬ ಕಾರಣದಿಂದ ಸರಣಿಯಿಂದ .ಹೊರ ಇಡಲಾಗಿದೆ ಎಂದು ಬಿಸಿಸಿಐ ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿದ್ದಾರೆ.
ಮಂಗಳವಾರ, 25 ಹರೆಯದ ಬುಮ್ರಾ ಬದಲಿಗೆ ಉಮೇಶ್ ಯಾದವ್ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಲಾಯಿತು. 3 ಪಂದ್ಯಗಳ ಟೆಸ್ಟ್ ಸರಣಿಗೆ ಬುಮ್ರಾ ಬದಲಿಯಾಗಿ ಉಮೇಶ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಯಾದವ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದರು.
ಬುಮ್ರಾ ಮೊದಲ ಟೆಸ್ಟ್‌ನಲ್ಲಿ 7 ಕ್ಕೆ 5 ವಿಕೆಟ್‌ಗಳನ್ನು ಕಬಳಿಸಿದ ಮತ್ತು ಎರಡನೇ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೂರನೇ ಭಾರತೀಯ ಎಂಬ ಬಿರುದನ್ನು ಪಡೆದರು. ವಿಂಡೀಸ್ ವಿರುದ್ಧ ಬುಮ್ರಾ ಉತ್ತಮ ಆಟದೊಂದಿಗೆ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಏರಿದರು ಮತ್ತು ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್ 835 ಸಾಧಿಸಲು ಸಹಾಯ ಮಾಡಿತು.
ಅವರು ಇಲ್ಲಿಯವರೆಗೆ 12 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು 19.24ರ ಸರಾಸರಿಯಲ್ಲಿ 62 ವಿಕೆಟ್ಗಳನ್ನು ಗಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ವಿಶ್ವದ ಅಗ್ರ ಬೌಲರ್ ಆಗಿ ತಮ್ಮ ಸ್ಥಾನವನ್ನು ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು, ಇದರಲ್ಲಿ ಅವರು ಏಳು ವಿಕೆಟ್ಗಳನ್ನು ಗಳಿಸಿದರು. ಅವರು ಏಕದಿನ ಪಂದ್ಯಗಳಲ್ಲಿ ನಂಬರ್ ಒನ್ ಬೌಲರ್ ಎಂದು ಅನಿಸಿಕೊಂಡವರು.
ಬುಧವಾರ ಅಭಿಮಾನಿಗಳಿಗೆ ಸಂದೇಶವನ್ನು ತಿಳಿಸಲು ಜಸ್ಪ್ರೀತ್ ಬುಮ್ರಾ ಟ್ವಿಟ್ಟರ್ ಗೆ ಮೊರೆಹೋದರು. “ಗಾಯಗಳು ಕ್ರೀಡೆಯ ಭಾಗ. ನಿಮ್ಮ ಎಲ್ಲಾ ಚೇತರಿಕೆ ಶುಭಾಶಯಗಳಿಗೆ ಧನ್ಯವಾದಗಳು. ಹಿನ್ನಡೆಗಿಂತ ಬಲವಾದ ಪುನರಾಗಮನದ ಗುರಿ ಹೊಂದಿದ್ದೇನೆ” ಎಂದು ಜಸ್ಪ್ರೀತ್ ಬುಮ್ರಾ ಟ್ವೀಟ್ ಮಾಡಿದ್ದಾರೆ.
31 ವರ್ಷದ ಯಾದವ್ ಕಳೆದ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ತಂಡದ ಭಾಗವಾಗಿದ್ದರೂ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದರು. ಭಾರತಕ್ಕಾಗಿ ಈವರೆಗೆ ಆಡಿದ 41 ಟೆಸ್ಟ್ ಪಂದ್ಯಗಳಲ್ಲಿ ಯಾದವ್ 33.47 ಸರಾಸರಿಯಲ್ಲಿ 119 ವಿಕೆಟ್ ಪಡೆದಿದ್ದಾರೆ.
ವಿಕಿರಣಶಾಸ್ತ್ರದ ತಪಾಸಣೆಯ ಸಮಯದಲ್ಲಿ ಗಾಯ ಪತ್ತೆಯಾಗಿದ್ದು, ಅವರು ಈಗ ಎನ್‌ಸಿಎಯಲ್ಲಿ ಪುನರ್ವಸತಿಗೆ ಒಳಗಾಗಲಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡವು ಈ ಬಗ್ಗೆ ಮೇಲ್ವಿಚಾರಣೆ ನಡೆಸಲಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಬಿಸಿಸಿಐ ಅಧಿಕಾರಿಯೊಬ್ಬರು, ಬುಮ್ರಾ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಸಹ ತಪ್ಪಿಸಿಕೊಳ್ಳಬಹುದು ಎಂದು ಹೇಳಿದರು. ಇದು ನವೆಂಬರ್ 3 ರಿಂದ 26 ರವರೆಗೆ ನಡೆಯಲಿದೆ.
Be the first to comment on "ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಹೊರ ಉಳಿದ ನಂತರ ಪ್ರತಿಕ್ರಿಯಿಸಿದ ಜಸ್ಪ್ರಿತ್ ಬುಮ್ರಾ!"