ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಸ್ಪರ್ಧೆಯಿಂದ ಹಿಂದೆ ಸರಿದ ಬಾಬರ್‌ ಆಝಮ್!

Pakistan's batman Babar Azam celebrates his century against Sri Lanka in Karachi, Pakistan, Monday, Sept. 30, 2019. Pakistan and Sri Lanka are playing the second one-day international. Pakistani captain Sarfaraz Ahmed seen at right. (AP Photo/Fareed Khan)
ಕೊಹ್ಲಿ ಮತ್ತು ಬಾಬರ್‌ ನಡುವೆ ಹೋಲಿಕೆ ನಡೆಯುತ್ತಲೇ ಇದೆ. ಹಲವರು ಕೊಹ್ಲಿಗಿಂತ ಬಾಬರ್‌ ಬೆಸ್ಟ್‌ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ, ಬಾಬರ್‌ ತಮ್ಮನ್ನು ವಿರಾಟ್‌ ಜೊತೆಗೆ ಹೋಲಿಕೆ ಮಾಡದೇ ಇರುವಂತೆ ಕೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಸ್ಪರ್ಧೆಯಿಂದ ಹಿಂದೆ ಸರಿದ ಬಾಬರ್‌ ಆಝಮ್!

  • ಕೊಹ್ಲಿ ಜೊತೆಗೆ ಹೋಲಿಕೆ ಬೇಡ ಎಂದ ಬಾಬರ್‌.
  • ಖಾಲಿ ಕ್ರೀಡಾಂಗಣದಲ್ಲಿ ಆಡಿ ಪಾಕ್‌ ತಂಡಕ್ಕೆ ಅಭ್ಯಾಸವಿದೆ.
  • ದುಬೈನಲ್ಲಿ ಕಳೆದ 10 ವರ್ಷಗಳಿಂದ ಪ್ರೇಕ್ಷಕರಿಲ್ಲದೆ ಆಡುತ್ತಿದ್ದೇವೆ ಎಂದ ಪಾಕಿಸ್ತಾನ ತಂಡದ ನಾಯಕ.

ಕರಾಚಿ: ಪಾಕಿಸ್ತಾನ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕ ಬಾಬರ್‌ ಆಝಮ್‌, ಟೀಮ್‌ ಇಂಡಿಯಾದ ಕಪ್ತಾನ ವಿರಾಟ್‌ ಕೊಹ್ಲಿ ಜೊತೆಗಿನ ಹೋಲಿಕೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಇಬ್ಬರೂ ವಿಭಿನ್ನ ಶೈಲಿಯ ಆಟಗಾರರು ಎಂದಿದ್ದಾರೆ.

ಇಬ್ಬರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಈ ಮೊದಲೇ ನಾನು ಹೇಳಿದ್ದೇನೆ ಅವರು ವಿಭಿನ್ನ ಆಟಗಾರ. ನನ್ನ ಆಟವೇ ಬೇರೆ ರೀತಿ. ನಾನು ಉತ್ತಮವಾಗಿ ಬ್ಯಾಟ್‌ ಮಾಡಲಷ್ಟೇ ಪ್ರಯತ್ನಿಸುತ್ತಿದ್ದೇನೆ. ಪ್ರತಿ ಬಾರಿ ಅಂಗಣಕ್ಕೆ ಇಳಿದಾಗ ನನ್ನ ತಂಡಕ್ಕೆ ಪಂದ್ಯ ಗೆದ್ದುಕೊಡುವ ಪ್ರಯತ್ನ ಮಾಡುತ್ತೇನೆ,” ಎಂದು ಸಂದರ್ಶನವೊಂದರಲ್ಲಿ ಬಾಬರ್ ಹೇಳಿಕೊಂಡಿದ್ದಾರೆ.

ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ 25 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ಬಾಬರ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಪಾಕಿಸ್ತಾನದ ನೂತನ ಬ್ಯಾಟಿಂಗ್ ತಾರೆಯಾಗಿ ಹೊರಹೊಮ್ಮಿದ್ದಾರೆ. ಆದ್ದರಿಂದಲೇ ಹಲವು ಮಾಜಿ ಕ್ರಿಕೆಟಿಗರು ಬಾಬರ್‌ ಮತ್ತು ವಿರಾಟ್‌ ಕೊಹ್ಲಿ ನಡುವೆ ಹೋಲಿಕೆ ಮಾಡಲಾರಂಭಿಸಿದ್ದಾರೆ. ವಿರಾಟ್‌ ಟೆಸ್ಟ್, ಒಡಿಐ ಮತ್ತು ಟಿ20ಯಲ್ಲಿ 50+ ಬ್ಯಾಟಿಂಗ್‌ ಸರಾಸರಿ ಹೊಂದಿರುವ ಏಕಮಾತ್ರ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಇದೇ ವೇಳೆ ಮುಚ್ಚಿದ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡುವ ಅನುಭವದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಾಬರ್‌, ಕಳೆದ ಹತ್ತು ವರ್ಷಗಳಿಂದ ತವರಿನ ಕ್ರಿಕೆಟ್‌ ಸರಣಿಗಳೆಲ್ಲವನ್ನೂ ನಾವು ಯುಎಇದಲ್ಲಿ ಆಡುತ್ತಿದ್ದೇವೆ. ಅಲ್ಲಿ ಖಾಲಿ ಕ್ರೀಡಾಂಗಣದಲ್ಲೇ ಆಡುತ್ತೇವೆ ಎಂದಿದ್ದಾರೆ.

“ಕಳೆದ ಹತ್ತು ವರ್ಷಗಳಿಂದ ದುಬೈನಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡುತ್ತಿದ್ದೇವೆ. ಹೀಗಾಗಿ ಪ್ರೇಕ್ಷಕರಿಲ್ಲದೆ ಕ್ರಿಕೆಟ್‌ ಆಡುವುದರ ಅನುಭವ ಉಳಿದೆಲ್ಲಾ ತಂಡಗಳಿಗಿಂತಲೂ ನಮ್ಮ ತಂಡಕ್ಕೆ ಹೆಚ್ಚಿದೆ. ಖಾಲಿ ಕ್ರೀಡಾಂಗಣದಲ್ಲಿ ಆಡುವುದು ನಮಗಾಗಲಿ ಅಥವಾ ಪ್ರೇಕ್ಷಕರಿಗಾಗಲಿ ಉತ್ತಮ ಅನುಭವ ನೀಡುವುದಿಲ್ಲ,” ಎಂದಿದ್ದಾರೆ.

2008ರಲ್ಲಿ ಶ್ರೀಲಂಕಾ ತಂಡದ ಬಸ್‌ ಮೇಲೆ ನಡೆದ ಉಗ್ರರ ದಾಳಿ ಬಳಿಕ ಟೆಸ್ಟ್‌ ಆಡುವ ಯಾವುದೇ ತಂಡ ಕಳೆದ 10 ವರ್ಷಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿರಲಿಲ್ಲ. ಇತ್ತೀಚೆಗೆ ಶ್ರೀಲಂಕಾ ತಂಡ ಪಾಕ್‌ ಪ್ರವಾಸ ಕೈಗೊಂಡು 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಿತ್ತು.

Be the first to comment on "ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಸ್ಪರ್ಧೆಯಿಂದ ಹಿಂದೆ ಸರಿದ ಬಾಬರ್‌ ಆಝಮ್!"

Leave a comment

Your email address will not be published.