ವಿರಾಟ್ ಕೊಹ್ಲಿ ಕೆಟ್ಟ ನಾಯಕನಲ್ಲ, ಆದರೆ ರೋಹಿತ್ ಶರ್ಮಾ ಉತ್ತಮ ನಾಯಕ: ಗೌತಮ್ ಗಂಭೀರ್:

ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ  ಒಳ್ಳೆಯ ನಾಯಕ, ಆದರೆ ರೋಹಿತ್ ಶರ್ಮಾ ಇನ್ನೂ ಉತ್ತಮ ನಾಯಕ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಹೇಳಿದ್ದಾರೆ. ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯಶಸ್ಸನ್ನು ಗಮನಿಸಿ  ಗಂಭೀರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಶೋ ಕನೆಕ್ಟ್ ಜೊತೆ ಮಾತನಾಡಿದ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಕೆಟ್ಟ ನಾಯಕ ಎಂದು ಹೇಳುವುದಿಲ್ಲ ಆದರೆ ರೋಹಿತ್ ಶರ್ಮಾ ಉತ್ತಮ ನಾಯಕ. ನಾಯಕತ್ವದ ವಿಚಾರದಲ್ಲಿ ಇಬ್ಬರ ಮಧ್ಯೆ ತುಂಬಾ ವ್ಯತ್ಯಾಸವಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಪ್ರೀಮಿಯರ್ ಲೀಗ್ನಲ್ಲಿ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ, ಆದರೆ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ಸ್ ಆಗಿ ಗೆದ್ದಿದ್ದಾರೆ. ತಂಡಗಳ ನಾಯಕತ್ವದಲ್ಲಿನ ಈ ವ್ಯತ್ಯಾಸವನ್ನು ಗಮನಿಸಿ ಗೌತಮ್ ಗಂಭೀರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಏಕದಿನ, T-20I ಮತ್ತು  ಮೂರೂ ಟೆಸ್ಟ್ ಮಾದರಿಗಳಲ್ಲೂ ಕೊಹ್ಲಿ ನಾಯಕತ್ವವನ್ನು  ವಹಿಸಿಕೊಂಡಿದ್ದಾರೆ. ನವೆಂಬರ್ 27 ರಿಂದ ಆರಂಭವಾಗುವ ಭಾರತ-ಆಸ್ಟ್ರೇಲಿಯಾ ಪಂದ್ಯವು  ಡಿಸೆಂಬರ್ 19ರವರೆಗೆ ನಡೆಯುತ್ತದೆ.

ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ, ಆದರೆ ರೋಹಿತ್ ಶರ್ಮಾ ಅವರಿಗಿಂತ ಉತ್ತಮ ನಾಯಕತ್ವವನ್ನು ನಿಭಾಯಿಸಿದ್ದಾರೆ ಎಂದು ಹೇಳಿರುವುದಾಗಿ ಎಎನ್ಐ ವರದಿ ಬಂದಿತು.

ಇತ್ತೀಚಿನ ಟೆಲಿವಿಷನ್ ಕ್ರಿಕೆಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಕೆಟ್ಟ ನಾಯಕನಲ್ಲ, ಆದರೆ ರೋಹಿತ್ ಶರ್ಮಾ ಉತ್ತಮ ನಾಯಕ. ನಾಯಕತ್ವದ ಗುಣಮಟ್ಟಕ್ಕೂ ಬಹಳ ವ್ಯಾತಾಸವಿದೆ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ಇತ್ತೀಚಿಗೆ ಪ್ರೀಮಿಯರ್ ಲೀಗ್ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದರು ಮತ್ತು ಯುಎಇಯಲ್ಲಿ 5ನೇ ಬಾರಿಗೆ ತಮ್ಮ ನಾಯಕತ್ವದಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಜಯ ಗಳಿಸಿದ್ದಾರೆ.

ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ 2020 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್  ಶರ್ಮಾ ಇಬ್ಬರು ಇದೀಗ ಆಸ್ಟ್ರೇಲಿಯಾದಲಿದ್ದಾರೆ. ಕೊಹ್ಲಿ ಅವರನ್ನು ಎಲ್ಲಾ 3 ತಂಡಗಳಿಗೆ ನಾಯಕತ್ವಕ್ಕೆ ಆಯ್ಕೆ ಮಾಡಿದ್ದಾರೆ.

ಅಡಿಲೇಡ್ನಲ್ಲಿ ನಡೆಯುವ ಆರಂಭಿಕ ಪಂದ್ಯದ  ಬಳಿಕ ವಿರಾಟ್  ಕೊಹ್ಲಿ ಭಾರತಕ್ಕೆ ವಾಪಾಸ್ ಆಗಲಿದ್ದಾರೆ, ರೋಹಿತ್ ಶರ್ಮಾ ಟೆಸ್ಟ್ ಪಂದ್ಯಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ.

ಭಾರತ T-20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಬೇಕೆಂದು ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Be the first to comment on "ವಿರಾಟ್ ಕೊಹ್ಲಿ ಕೆಟ್ಟ ನಾಯಕನಲ್ಲ, ಆದರೆ ರೋಹಿತ್ ಶರ್ಮಾ ಉತ್ತಮ ನಾಯಕ: ಗೌತಮ್ ಗಂಭೀರ್:"

Leave a comment

Your email address will not be published.