ಮೊದಲ ಟೆಸ್ಟ್‌

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಕದನ ರಂಗೇರುತ್ತಿದ್ದು, ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧದ ಟೆಸ್ಟ್‌ ಸರಣಿ ಮೂಲಕ ಅಖಾಡಕ್ಕೆ ಇಳಿಯುತ್ತಿದೆ. ವಿಶಾಖಪಟ್ಟಣದಲ್ಲಿ ಪ್ರಥಮ ಟೆಸ್ಟ್‌ ಪಂದ್ಯ ಆರಂಭವಾಗಿದ್ದು, ಲೈವ್‌ ಸ್ಕೋರ್‌ ಅಪ್ಡೇಟ್‌ಗಳನ್ನು ಇಲ್ಲಿ ಪಡೆಯಬಹುದಾಗಿದೆ.

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಮೊದಲ ಟೆಸ್ಟ್‌ ಸರಣಿಯ ಮೊದಲ ಹಣಾಹಣಿ ಇಲ್ಲಿನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ಬುಧವಾರ (ಅಕ್ಟೋಬರ್‌ 2) ಆರಂಭವಾಗಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ ಟೀಮ್‌ ಇಂಡಿಯಾ ಬೃಹತ್‌ ಮೊತ್ತದ ಕಡೆಗೆ

ಈ ಪಂದ್ಯದ ಮೂಲಕಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ, ತಮ್ಮ ಮೇಲಿನ ನಿರೀಕ್ಷೆಯ ಭಾರವನ್ನು ಯಶಸ್ವಿಯಾಗಿ ನಿಭಾಯಿಸಿ ಭೋಜನ ವಿರಾಮಕ್ಕೂ ಮೊದಲೇ ಅರ್ಧಶತಕ ಬಾರಿಸಿದರು. ಆ ಹೊತ್ತಿಗಾಗಲೇ ಅವರ ಇನಿಂಗ್ಸ್‌ನಲ್ಲಿ 2 ಸ್ಫೋಟಕ ಸಿಕ್ಸರ್‌ಗಳು ಕೂಡ ಮೂಡಿಬಂದಿದ್ದವು.

ಭೋಜನದ ಬಳಿಕವೂ ಎದುರಾಳಿ ಬೌಲರ್‌ಗಳ ಬೆಂಡೆತ್ತುವುದನ್ನು ಮುಂದುವರಿಸಿದ ರೋಹಿತ್‌, 160 ಎಸೆತಗಳಲ್ಲಿ 100 ರನ್‌ಗಳನ್ನು ಪೂರೀಸಿದರು. ಇದು ರೋಹಿತ್‌ ಅವರ ಟೆಸ್ಟ್‌ ವೃತ್ತಿ ಬದುಕಿನ ನಾಲ್ಕನೇ ಶತಕವಾಗಿದೆ. ಇದೇ ವೇಳೆ ಭಾರತದಲ್ಲಿ ಆಡಿದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ 6ನೇ ಬಾರಿ 50+ ರನ್‌ ಗಳಿಸಿದ ಸಾಧನೆಯನ್ನೂ ಮಾಡಿದರು. ಭೋಜನ ವಿರಾಮಕ್ಕೆ ಭಾರತ ತಂಡ ಯಾವುದೇ ವಿಕೆಟ್‌ ನಷ್ಟವಿಲ್ಲದೆ 91 ರನ್‌ಗಳನ್ನು ಗಳಿಸಿತ್ತು.

ಬಳಿಕ ದಿನದ ಎರಡನೇ ಅವಧಿಯಲ್ಲಿ 59.1 ಓವರ್‌ಗಳಲ್ಲಿ ಭಾರತ ತಂಡ ಯಾವುದೇ ವಿಕೆಟ್‌ ನಷ್ಟವಿಲ್ಲದೆ 202 ರನ್‌ಗಳನ್ನು ಗಳಿಸಿದ್ದಾಗ ಸುರಿದ ಧಾರಾಕಾರ ಮಳೆಯಿಂದಾಗಿ ದಿನದ ಉಳಿದ ಅವಧಿಯನ್ನು ರದ್ದು ಪಡಿಸಲಾಯಿತು. ಈ ಮೂಲಕ ಮೊದಲ ದಿನದ ಗೌರವ ಟೀಮ್‌ ಇಂಡಿಯಾ ಪಾಲಾಯಿತು. 174 ಎಸೆತಗಳನ್ನು ಎದುರಿಸಿರುವ ರೋಹಿತ್‌, 12 ಫೋರ್‌ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 115 ರನ್‌ ಗಳಿಸಿ ದ್ವಿಶತಕ ದಾಖಲಿಸುವುದನ್ನು ಎದುರು ನೋಡುತ್ತಿದ್ದಾರೆ.

ವಿರಾಮದ ಬಳಿಕ ಬ್ಯಾಟಿಂಗ್‌ಗೆ ಹೇಳಿಮಾಡಿಸಿದ್ದ ಸ್ಥಿತಿಗತಿಗಳಲ್ಲಿ ಹರಿಣ ಪಡೆದ ಬೌಲರ್‌ಗಳನ್ನು ದಣಿಯುವಂತೆ ಮಾಡಿದ ಭಾರತದ ಆರಂಭಿಕ ಜೋಡಿ ಮೊದಲ ವಿಕೆಟ್‌ಗೆ 200+ ರನ್‌ಗಳ ಜೊತೆಯಾಟವಾಡಿತು. ಈ ಹಂತದಲ್ಲಿ ರೋಹಿತ್‌ ಶತಕ ವೈಭವ ಮೆರೆದರೆ, ಅವರಿಗೆ ಉತ್ತಮ ಸಾಥ್‌ ನೀಡಿದ ಮತ್ತೊಬ್ಬ ಆರಂಭಕಾರ ಕರ್ನಾಟಕದ ತಾರೆ ಮಯಾಂಕ್‌ ಅಗರ್ವಾಲ್‌, 183 ಎಸೆತಗಳಲ್ಲಿ 11 ಫೋರ್‌ ಮತ್ತು 2 ಸಿಕ್ಸರ್‌ ಒಳಗೊಂಡಿರುವ 84 ರನ್‌ಗಳನ್ನು ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್‌ ಶರ್ಮಾ, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ, ಆರ್‌. ಅಶ್ವಿನ್‌, ಆರ್‌. ಜಡೇಜಾ, ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ.

Be the first to comment on "ಮೊದಲ ಟೆಸ್ಟ್‌"

Leave a comment

Your email address will not be published.


*