ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಬದಲು ವೃದ್ಧಿಮಾನ್ ಸಹಾ!

ಅಕ್ಟೋಬರ್ 2ರಿಂದ ವಿಶಾಖಪಟ್ಟಣಂನಲ್ಲಿ  ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 21ರ ಹರೆಯದ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಬದಲಾಗಿ ವೃದ್ಧಿಮಾನ್ ಸಹಾ ಸ್ಥಾನವನ್ನು ಪಡೆದುಕೊಳ್ಳಬಹುದು. ವೆಸ್ಟ್ ಇಂಡೀಸ್ ಸರಣಿಯಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಟಿ20ಐ ಸರಣಿಯಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಪಂತ್ ಅವರ ಕಳಪೆ ಪ್ರದರ್ಶನ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೂಲಗಳ ಪ್ರಕಾರ “ಆಯ್ಕೆ ಮಂಡಳಿಯು ಮೊದಲ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲು ಅಂತಿಮ ಅವಕಾಶವನ್ನು ನೀಡುವ ಮನಸ್ಥಿತಿಯಲ್ಲಿದ್ದಾರೆ, ಆದರೆ ತಂಡದ ನಿರ್ವಹಣಾ ತರಬೇತುದಾರ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿಯ ಪ್ರಕಾರ ವೃದ್ಧಿಮಾನ್ ಸಹ ಅವರು ಸರಣಿಯಲ್ಲಿ ಪಾಲ್ಗೊಳ್ಳಬೇಕೆಂದು ಬಯಸುತಾರೆ” ಎಂದು ತಿಳಿದುಬಂದಿದೆ.

ಪಂತ್‌ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡನ್ನೂ ನಿಭಾಯಿಸುವುದರಲ್ಲಿ ಅವರ ಆತ್ಮವಿಶ್ವಾಸವನ್ನು ಘಾಸಿಗೊಳಿಸುತ್ತಿದೆ.  ಡೆಸಿಷನ್ ರಿವ್ಯೂ ಸಿಸ್ಟಮ್ (ಡಿಆರ್ಎಸ್) ಯೊಂದಿಗೆ ಪಂತ್ ಅವರ ಕಳಪೆ ಟ್ರ್ಯಾಕ್ ರೆಕಾರ್ಡ್ ಮತ್ತು ವಿಕೆಟ್ ಕೀಪಿಂಗ್ ನಿರ್ವಹಣೆಯಲ್ಲಿ ತೊಂದರೆ, ತಂಡದ ಕಾಳಜಿಯನ್ನು ಉಲ್ಬಣಗೊಳಿಸಿದೆ. ನಾಯಕ ಮತ್ತು ತರಬೇತುದಾರ ಸ್ಟಂಪ್‌ಗಳ ಹಿಂದೆ ಉತ್ತಮ ಸುಸಜ್ಜಿತ ಕೈಯನ್ನು ನಿಲ್ಲಿಸುವುದಾಗಿ ಯೋಚಿಸಿ ವೃದ್ಧಿಮಾನ್ ಅವರನ್ನು ಕರೆತರಲು ಮುಂದಾಗಿದ್ದಾರೆ. ಸಹಾ, ಪಂತ್ ಅವರಿಗಿಂತ ಉತ್ತಮ ಕೀಪರ್ ಮತ್ತು ವಿರುದ್ಧ ತಂಡದ ಕೆಲವು ಉಪಯುಕ್ತ ರನ್ಗಳನ್ನು ತಡೆಯುವುದರಲ್ಲಿ ಸಹಾಯ ಮಾಡುತ್ತಾರೆ ಎಂದು ಅವರ ಅಭಿಪ್ರಾಯ.

‘ಸತತ ವೈಫಲ್ಯಗಳ ಹೊರತಾಗಿಯೂ, ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ವಿರಾಮ ಪಡೆದ ನಂತರ ಈಗ ಭಾರತದ ಮುಖ್ಯ ಸ್ಟಂಪರ್ ಆಗಿರುವ ಪಂತ್ ಅವರಂತೆ ಪ್ರತಿಭಾವಂತ ವ್ಯಕ್ತಿಯೊಂದಿಗೆ ತಾಳ್ಮೆಯಿಂದಿರಬೇಕು” ಎಂದು ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ

ಏಷ್ಯಾದ ಹೊರಗೆ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ. ಪಂತ್ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಮತ್ತು ಶಕ್ತಿಯಿಂದ ತುಂಬಿದ ಪ್ರದರ್ಶನವನ್ನು ನೀಡಿದ್ದಾರೆ ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದೇ ರೀತಿಯ ನಿರ್ವಹಣೆ ಮಾಡುವುದು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ದೇಶೀಯ ಕ್ರಿಕೆಟ್‌ಗೆ ಮರಳಲು ನಿರ್ಧರಿಸಿದ್ದಾರೆ ಮತ್ತು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ತಮ್ಮನ ತೊಡಗಿಸಿಕೊಂಡಿದ್ದಾರೆ. ಇದು ಅವರಿಗೆ ಆತ್ಮವಿಶ್ವಾಸವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅವರ ನಂಬಿಕೆ.

ವೃದ್ಧಿಮಾನ್ ಸಹಾ ಅವರು ಒಬ್ಬ ಅನುಭವಿ ಆಟಗಾರ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಪರ ಆಡಿದ 32 ಟೆಸ್ಟ್ ಪಂದ್ಯಗಳಲ್ಲಿ 1164ರನ್ ಗಳಿಸಿದ್ದಾರೆ. 111 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು 101 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.

Be the first to comment on "ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಬದಲು ವೃದ್ಧಿಮಾನ್ ಸಹಾ!"

Leave a comment

Your email address will not be published.


*