ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ 4ನೇ ಸ್ಥಾನವನ್ನು ನಾನು ತುಂಬಬಲ್ಲೆ- ಸುರೇಶ್ ರೈನಾ!

ಭಾರತೀಯ ಬ್ಯಾಟ್ಸ್‌ಮನ್ ಸುರೇಶ್ ರೈನಾ ತಮ್ಮ ಕನಸುಗಳನ್ನು ನನಸಾಗಿಸಲು ಹೆಚ್ಚು ಚರ್ಚೆಯನ್ನುಂಟು ಮಾಡಿರುವ  ನಂ.4ನೇ ಸ್ಥಾನವನ್ನು ನಿಭಾಯಿಸಲು ಮುಂದಾಗಿದ್ದಾರೆ. ಕೊನೆಯ ಬಾರಿಗೆ 2018 ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಪಂದ್ಯದಲ್ಲಿ ಪಾಲ್ಗೊಂಡಿದ್ದ ರೈನಾ, 2020 ಮತ್ತು 2021ರ ಎರಡು ಟಿ20 ವಿಶ್ವಕಪ್ಗಳೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳುವತ್ತ ಗಮನ ಹರಿಸಿದ್ದಾರೆ.

“ನಾನು ಈ ಹಿಂದೆ ಭಾರತಕ್ಕೆ 4ನೇ ಸ್ಲಾಟ್‌ನ ಆಟಗಾರನಾಗಿ ಬ್ಯಾಟಿಂಗ್ ಮಾಡಿದ್ದೇನೆ ಮತ್ತು ಇಂದು ಸಹ ಆ ಸ್ಥಾನವನ್ನು ತುಂಬಲು ಸಶಕ್ತನಾಗಿದ್ದೇನೆ. ಮುಂಬರುವ ಎರಡು ಟಿ20 ವಿಶ್ವಕಪ್‌ ಪಂದ್ಯದಲ್ಲಿ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ.” ರೈನಾ ಅಭಿಪ್ರಾಯಪಟ್ಟಿದ್ದಾರೆ.  ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರೈನಾ ತನ್ನ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ಬಿಟ್ಟುಕೊಟ್ಟಿಲ್ಲ. ನವೆಂಬರ್‌ನಿಂದ ಮತ್ತೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯನ್ನು ಹೊಂದಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ನಂ .4ರ ಬ್ಯಾಟಿಂಗ್ ಸ್ಪಾಟ್ ಟೀಮ್ ಇಂಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಅನೇಕ ಆಟಗಾರರನ್ನು ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಲಾಗಿದೆ. ಕೆಲ ಸಮಯದವರೆಗೂ ಅಂಬಾಟಿ ರಾಯುಡು ಅವರನ್ನು ಪ್ರಯತ್ನಿಸಿದರು. ಅವರು ಈ ಸ್ಥಾನವನ್ನು ತುಂಬುವಲ್ಲಿ ಯಶಸ್ವಿಯಾದರು. ಆದರೆ ಐಸಿಸಿ ವಿಶ್ವಕಪ್‌ಗೆ ಸ್ವಲ್ಪ ಮುಂಚೆ ಕಳಪೆ ಪ್ರದರ್ಶನದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು.

 ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ನಲ್ಲಿ ವಿಜಯ್ ಶಂಕರ್‌ಗೆ ಆ ಸ್ಥಾನದಲ್ಲಿ ಆಡುವ ಜವಾಬ್ದಾರಿಯನ್ನು ವಹಿಸಲಾಯಿತು. ಆದರೆ, ಪಂದ್ಯಾವಳಿಯ ಅವಧಿಯಲ್ಲಿ ಶಂಕರ್ ಗಾಯಗೊಂಡಿದ್ದರಿಂದ ರಿಷಭ್ ಪಂತ್ ಅವರನ್ನು ಸ್ಥಾನ ತುಂಬಲು ಕರೆತರಲಾಯಿತು. ಪಂತ್ ಅವರ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದಿರದ ಕಾರಣ ಹಲವಾರು ಭಾಗಗಳಿಂದ ಕಠಿಣ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದ ಇತ್ತೀಚೆಗೆ ಪ್ರಾರಂಭಗೊಂಡ ಟಿ20ಐ ಸರಣಿಯಲ್ಲಿ ಪಂತ್ ಅವರ ನೀರಸ ಪ್ರದರ್ಶನವು ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ನಂ .4 ಸ್ಥಾನದ ಸುತ್ತಲೂ ಮತ್ತೊಮ್ಮೆ ಚರ್ಚೆಗಳಿಗೆ ಆಸ್ಪದವನುಂಟು ಮಾಡಿದೆ. ಎಂ.ಎಸ್. ಧೋನಿಯ ಪರಿಪೂರ್ಣ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟ ಪಂತ್ ಆ ಸ್ಥಾನವನ್ನು ತುಂಬಲು ವಿಫಲರಾಗಿದ್ದಾರೆ. ಇದರ ಕುರಿತಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಈಡೀ ತಂಡದ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

78 ಟಿ20ಐಗಳಲ್ಲಿ 1605 ರನ್ ಗಳಿಸಿರುವ ಅನುಭವಿ ಆಟಗಾರ ರೈನಾ, ಈ ಸ್ಥಾನಕ್ಕಾಗಿ ತಾವು ಮುಡಿಪಾಗಿರಲು ಬಯಸುತ್ತಾರೆ. ಪಂತ್ ಅವರನ್ನು ಬೆಂಬಲಿಸುತ ” ಕ್ರಿಕೆಟ್ ಒಂದು ಮಾನಸಿಕ ಆಟವಾಗಿದ್ದು, ತನ್ನ ಆಕ್ರಮಣಕಾರಿ ಪ್ರದರ್ಶನದ ಮೂಲಕ ಪಂದ್ಯವನ್ನು ಆಡಬೇಕು. ಪಂತ್ ಗೊಂದಲಕ್ಕೊಳಗಾಗುತ್ತಾನೆ, ಮತ್ತು ಅವನು ನೈಸರ್ಗಿಕ ಆಟವನ್ನು ಆಡುತ್ತಿಲ್ಲ. ಅವರು ಸಿಂಗಲ್ಸ್‌ಗಾಗಿ ಹುಡುಕುತ್ತಿದ್ದಾರೆ, ನಿರ್ಬಂಧಿಸುತ್ತಿದ್ದಾರೆ ಮತ್ತು ಕಳೆದುಹೋಗಿದ್ದಾರೆ” ಎಂದು ರೈನಾ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

Be the first to comment on "ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ 4ನೇ ಸ್ಥಾನವನ್ನು ನಾನು ತುಂಬಬಲ್ಲೆ- ಸುರೇಶ್ ರೈನಾ!"

Leave a comment

Your email address will not be published.


*